ರಿಚರ್ಡ್ ಆಂಟೋನಿಯಾಗಿ ಮತ್ತೆ ಬಂದ ರಕ್ಷಿತ್ ಶೆಟ್ಟಿ
"ಉಳಿದವರು ಕಂಡಂತೆ" ಎಂಬ ವಿಭಿನ್ನ ಶೈಲಿಯ ಚಿತ್ರವನ್ನ ನಿರ್ದೇಶಿಸಿದ್ದ ನಟ ರಕ್ಷಿತ್ ಶೆಟ್ಟಿ ಅವರ ಅಭಿಮಾನಿಗಳ ಆಶಯದಂತೆ "ರಿಚರ್ಡ್ ಆಂಟೋನಿ" ಯಾಗಿ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. ಈ ಬಾರಿ ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲಂಸ್‍ನಡಿಯಲ್ಲಿ ರಕ್ಷಿತ್ ನಟನೆಯೊಂದಿಗೆ ಚಿತ್ರ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಸಂತಸ ಹಂಚಿಕೊಂಡ ರಕ್ಷಿತ್ ಉಳಿದವರು ಕಂಡಂತೆ ಚಿತ್ರದ ಮುಂದುವರೆದ ಭಾಗವಾಗಿ ರಿಚರ್ಡ್ ಆಂಟನಿ ಬರಲಿದೆ ಆದರೆ ವಿಭಿನ್ನವಾಗಿರಲಿದೆ ಎಂದಿದ್ದಾರೆ. ಉಳಿದವರು ಕಂಡಂತೆ ಚಿತ್ರಕ್ಕೆ ಸ್ಕ್ರಿಪ್ಟ್ ಬರೆದಾಗ ಅದರ ಮುಂದುವರಿದ ಭಾಗವನ್ನ ನಾನೇ ಮಾಡಲಿದ್ದೇನೆ ಎಂದು ಊಹಿಸಿರಲಿಲ್ಲ, ಆದರೆ ಇದು ಅಂದೇ ಮೊಳಕೆಯೊಡೆದ ಪ್ರಬಂಧದ ನಿರ್ಣಯ. ಆಗ ಗಿಡದ ಎಲೆಯಷ್ಟು ಕಥೆಯನ್ನು ತೆರೆ ಮೇಲೆ ತರಲು ಅವಕಾಶವಿತ್ತು, ಕಥೆಗೆ ತಾಳ್ಮೆ ಬಹುಶ ಜಾಸ್ತಿ ಅನಿಸುತ್ತೆ, ಈಗ ಮರದ ಕೊಂಬೆಯಷ್ಟು ಹೇಳಲು ನನ್ನನ್ನು ತಯಾರು ಮಾಡಿದೆ. ಹೌದು, ಮುಂದಿನ ಅಧ್ಯಾಯವನ್ನು ಆರಂಭ ಮಾಡುವ ಸಮಯ ಬಂದಾಗಿದೆ ಎಂದಿದ್ದಾರೆ. "ಮರುಬಂದನು ಅಲೆಗಳ ಜೊತೆ, ಕೆಂಪಾದವು ಕಡಲ ತೀರದ ಕಥೆ" ಎಂದಿರುವ ರಕ್ಷಿತ್, ಈ ಭಾರಿ ರಿಚ್ಚಿಯ ಆರ್ಭಟ ಇನ್ನೂ ಕಲರ್‍ಫುಲ್ ಆಗಿರಲಿದೆ ಎಂಬ ಸೂಚನೆ ನೀಡಿದ್ದಾರೆ. ಜುಲೈ ಹನ್ನೊಂದರಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾದ ಟೈಟಲ್ ಲಾಂಚ್ ವೀಡಿಯೊಗೆ ಅಭೂ