Posts

ರಿಚರ್ಡ್ ಆಂಟೋನಿಯಾಗಿ ಮತ್ತೆ ಬಂದ ರಕ್ಷಿತ್ ಶೆಟ್ಟಿ

Image
  "ಉಳಿದವರು ಕಂಡಂತೆ" ಎಂಬ ವಿಭಿನ್ನ ಶೈಲಿಯ ಚಿತ್ರವನ್ನ ನಿರ್ದೇಶಿಸಿದ್ದ ನಟ ರಕ್ಷಿತ್ ಶೆಟ್ಟಿ ಅವರ ಅಭಿಮಾನಿಗಳ ಆಶಯದಂತೆ "ರಿಚರ್ಡ್ ಆಂಟೋನಿ" ಯಾಗಿ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. ಈ ಬಾರಿ ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲಂಸ್‍ನಡಿಯಲ್ಲಿ ರಕ್ಷಿತ್ ನಟನೆಯೊಂದಿಗೆ ಚಿತ್ರ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.  ಈ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಸಂತಸ ಹಂಚಿಕೊಂಡ ರಕ್ಷಿತ್ ಉಳಿದವರು ಕಂಡಂತೆ ಚಿತ್ರದ ಮುಂದುವರೆದ ಭಾಗವಾಗಿ ರಿಚರ್ಡ್ ಆಂಟನಿ ಬರಲಿದೆ ಆದರೆ ವಿಭಿನ್ನವಾಗಿರಲಿದೆ ಎಂದಿದ್ದಾರೆ. ಉಳಿದವರು ಕಂಡಂತೆ ಚಿತ್ರಕ್ಕೆ ಸ್ಕ್ರಿಪ್ಟ್ ಬರೆದಾಗ ಅದರ ಮುಂದುವರಿದ ಭಾಗವನ್ನ ನಾನೇ ಮಾಡಲಿದ್ದೇನೆ ಎಂದು ಊಹಿಸಿರಲಿಲ್ಲ, ಆದರೆ ಇದು ಅಂದೇ ಮೊಳಕೆಯೊಡೆದ ಪ್ರಬಂಧದ ನಿರ್ಣಯ. ಆಗ ಗಿಡದ ಎಲೆಯಷ್ಟು ಕಥೆಯನ್ನು ತೆರೆ ಮೇಲೆ ತರಲು ಅವಕಾಶವಿತ್ತು, ಕಥೆಗೆ ತಾಳ್ಮೆ ಬಹುಶ ಜಾಸ್ತಿ ಅನಿಸುತ್ತೆ, ಈಗ ಮರದ ಕೊಂಬೆಯಷ್ಟು ಹೇಳಲು ನನ್ನನ್ನು ತಯಾರು ಮಾಡಿದೆ. ಹೌದು, ಮುಂದಿನ ಅಧ್ಯಾಯವನ್ನು ಆರಂಭ ಮಾಡುವ ಸಮಯ ಬಂದಾಗಿದೆ ಎಂದಿದ್ದಾರೆ.  "ಮರುಬಂದನು ಅಲೆಗಳ ಜೊತೆ, ಕೆಂಪಾದವು ಕಡಲ ತೀರದ ಕಥೆ" ಎಂದಿರುವ ರಕ್ಷಿತ್, ಈ ಭಾರಿ ರಿಚ್ಚಿಯ ಆರ್ಭಟ ಇನ್ನೂ ಕಲರ್‍ಫುಲ್ ಆಗಿರಲಿದೆ ಎಂಬ ಸೂಚನೆ ನೀಡಿದ್ದಾರೆ.  ಜುಲೈ ಹನ್ನೊಂದರಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾದ ಟೈಟಲ್ ಲಾಂಚ್ ವೀಡಿಯೊಗೆ ಅಭೂ

ನಾಳೆ ಏನಿಹುದೋ..??

Image
ಭಾವಯಾನದಲಿ ಕರಿ‌ಮೋಡಗಳ‌ ಸಂಘರ್ಷ..  ಸಿಟ್ಟ ಸುಡಲು‌ ಸೀಳಿ ಬರುತಿದೆ ಜ್ವಾಲೆಯ ನಿಷ್ಕರ್ಷ.. ಬಿರಿವ ಸಿಡಿಲಿನ ಹೊಡೆತಕೆ ಅಂಜುವುದೆ ಆಕಾಶ.. ಮತ್ತದೆ ನಿಶ್ಚಲತೆಗೆ ಮುಖವೊಡ್ಡಲಿಹುದು ಅವಕಾಶ.. ಹರಿವ‌ ನೀರೊಳಗೆ ಹರಿದು ತೇಲುವ ಬದುಕು.. ನಾಳೆ ಏನಿಹುದೊ‌; ನಿನ್ನೆ ಯಾರದೋ; ಪ್ರಶ್ನೆಗಳ ಸರಕು.. ಇಂದು ಕಾಡುತಿದೆ ನಿನ್ನೆ ಕಳೆದವರ ನೆನಪುಗಳ ಮೆಲುಕು.. ಕಳೆದು ಪಡೆದುದರ ಲಾಭ ನಷ್ಟಗಳ‌ ಇಲ್ಲೆ ಹುಡುಕು... ನಿಂತ ನೆಲದೊಳಗಿನ ಕುದಿಯಲ್ಲಿ ಕರಗದು ಇಬ್ಬನಿ.. ಜಗದ ಸೃಷ್ಟಿಯ ಮಾಯೆಯೇ ಎಲ್ಲೆಡೆ ಮಾರ್ದನಿ.. ನಗುವ ಹರಡುತ್ತ ಈ ನಾಲ್ಕು ದಿನದಲ್ಲಿ ಸಾಗು ನೀ.. ಸುಡುವ ಸೂರ್ಯಕಾಂತಿಗಿದೆ ಸಂಜೆ ತಂಪೆರೆವ ಗುಣ.. ಜಡಿಮಳೆಯೂ ಸೋನೆ ಸೂಸಿ‌ ನೀಡುವಳು ಔತಣ.. ಕಾಲನ ಮುಂದೆ ಎಲ್ಲರ ಆಟಗಳೂ ಗೌಣ.. ಎಲ್ಲ ಆಡಿಸುತಿಹನು ಬಂದು ಹೋಗೋ ಕಾಂಚಾಣ..                                                                                                      - ಭಾವವಾಹಿನಿ

PYRAMID VALLY

Image
ಪಿರಮಿಡ್ ವ್ಯಾಲಿ- ಧ್ಯಾನಕೇಂದ್ರ  ಬೆಂಗಳೂರಿನಿಂದ ಕನಕಪುರ ರಸ್ತೆಯ ಕೆಡೆ ಸುಮಾರು ಮೂವತ್ತು ಕಿ.ಮೀ ಸಾಗಿದರೆ ಸಿಗುವ ಹಾರೋಹಳ್ಳಿ ಬಳಿಯ ಕೆಬ್ಬದೋಡಿ ಯಲ್ಲಿ ಇರುವ  ಈ ಪಿರಮಿಡ್ ವ್ಯಾಲಿ ಧ್ಯಾನಾಸಕ್ತರ ಆಕರ್ಷಣೆ ಕೇಂದ್ರವಾಗಿದೆ. ಒಳಸಾಗುತ್ತಲೇ ಸುಂದರ ನೀರಿನ ಚಿಲುಮೆ ಸ್ವಾಗತಿಸುತ್ತದೆ. ಸುತ್ತಲೂ ನಿಶಬ್ಧ, ಹಸಿರು ಬೀಸಿ ಕರೆಯುತ್ತದೆ. ಸುಮಾರು ನೂರನಾಲ್ಕು ಅಡಿ ಎತ್ತರದ ಪಿರಮಿಡ್ ಒಳಗೆ ಐದು ಸಾವಿರ ಜನರು ಕುಳಿತು  ಧ್ಯಾನ ಮಾಡಬಹುದು.ಪಿರಮಿಡ್ ಒಳಗೆ ಆಸನಗಳ ವ್ಯವಸ್ಥೆ ಇದೆ.. ಪಿರಮಿಡ್ನ ನಾಲ್ಕನೇ ಮೂರುಭಾಗ ಎತ್ತರದಲ್ಲಿ ಕಿಂಗ್  ಸೀಟ್ ಇದೆ. ಅಲ್ಲಿ ಕೂತು ಧ್ಯಾನ ಮಾಡಿದರೆ ಹೆಚ್ಚಿನ  ಧ್ಯಾನದಲ್ಲಿ ತೊಡಗಿಕೊಳ್ಳಬಹುದು .  ಇನ್ನು ಮಕ್ಕಳಿಗೆ  ಆಟವಾಡಲು ಪರಿಕರಗಳು , ಕ್ಯಾಂಟೀನ್ , ಪಾರ್ಕಿಂಗ್  ಮತ್ತು ಅಲ್ಲೇ ಉಳಿದುಕೊಳಲು ವ್ಯವಸ್ಥೆ ಇದೆ .